10 ನೇ ತರಗತಿ ಮುಗಿದಿದೆ.., ಮುಂದೇನು.? ಇರುವ ಆಯ್ಕೆಗಳ ಬಗ್ಗೆ ಒಂದಿಷ್ಟು ಮಾಹಿತಿ.

ಪ್ರತಿಯೊಬ್ಬ ವಿದ್ಯಾರ್ಥಿಯ ಮೈಲುಗಲ್ಲು ಪ್ರಾರಂಭವಾಗುವದು ಕಾಲೇಜು ಶಿಕ್ಷಣದಿಂದ ಅಂದರೆ ತಪ್ಪಾಗದು.
10 ನೇ ತರಗತಿ ಮುಗಿಸಿದ ನಂತರದಲ್ಲಿ ಮುಂದಿನ ಶಿಕ್ಷಣಕ್ಕೆ ಆಯ್ಕೆಗಳೇನು.? ಎಂಬ ಪ್ರಶ್ನೆ ಮೂಡದೆ ಇರದು .ಹಲವು ಅವಕಾಶ ಇದ್ದರು ವಿದ್ಯಾರ್ಥಿಗಳು ಗೊತ್ತಿಲ್ಲದೆ ಮತ್ತು ಆಸಕ್ತಿ ಇಲ್ಲದೆ ಒಂದೆ ಕೊರ್ಸ್ ಜೋತು ಬೀಳುವದುಂಟು ಅಲ್ಲವೇ..!
ಎಸ್.ಎಸ್.ಎಲ್.ಸಿ. ಮುಗಿದ ಮೇಲೆ ಇರುವ ಆಯ್ಕೆಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ಓದಿ..
ಹತ್ತನೇ ತರಗತಿ ಮುಗಿದ ನಂತರ PUC ಒಂದು ಸಾಮಾನ್ಯ ಆಯ್ಕೆವಾಗಿದೆ. ಇದರಾಚೆ ಇತರ ಆಯ್ಕೆಗಳು
ಐ.ಟಿ.ಐ,
ಪಾಲಿಟೆಕ್ನಿಕ್ ಡಿಪ್ಲೊಮಾ,
ಪ್ಯಾರಮೆಡಿಕಲ್ ಡಿಪ್ಲೊಮಾಗಳು ಇತ್ಯಾದಿ ಆಯ್ಕೆಗಳಿವೆ.
ಪಿಯುಸಿ.
ಹೆಚ್ಚು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಕೊರ್ಸ್ ಇದಾಗಿದೆ.ಇದು 2 ವರ್ಷ ಅವಧಿಗಳ ಕಾಲ ಕೊರ್ಸ ಇರುತ್ತದೆ
ಇದು ಬೋರ್ಡ ಎಕ್ಸಾಂ ಹೊಂದಿರುತ್ತದೆ.2 ಭಾಷಾ ವಿಷಯಗಳಿದ್ದರೆ ಉಳಿದ 4 ಐಚ್ಚಿಕ ವಿಷಯಗಳು ಇರುತ್ತೇವೆ.
ಪಿ.ಯು.ಸಿ ಯಲ್ಲಿರುವ ಆಯ್ಕೆಗಳು ಇಂತಿವೆ.
ವಿಜ್ಞಾನ (SCIENCE):
ವಾಣಿಜ್ಯ (COMMERCE)
ಕಲೆ ವಿಭಾಗ (ARTS)
ವಿಜ್ಞಾನ (SCIENCE): ಹೆಸರೆ ಹೇಳುವಂತೆ ಇದು ವಿಜ್ಞಾನಕ್ಕೆ ಸಂಭಂದಪಟ್ಟ ವಿಷಯನೊಳಗೊಂಡಿರುತ್ತದೆ. ಇದರಲ್ಲಿ ಆಸಕ್ತಿ ಹೊಂದಿದ ವಿದ್ಯಾರ್ಥಿಗಳು ಅನೇಕ ಪರಿಕಲ್ಪನೆಗಳು, ಸಿದ್ಧಾಂತಗಳು, ಸೂತ್ರಗಳು ಮತ್ತು ಪ್ರಯೋಗಗಳಲ್ಲಿ ಉತ್ತಮ ಜ್ಞಾನ ಮತ್ತು ಆಸಕ್ತಿಯನ್ನು ಹೊಂದಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಸವಾಲುಗಳು ಮತ್ತು ಕಠಿಣ ಸ್ಪರ್ಧೆಗಳು, ಪ್ರವೇಶ ಪರೀಕ್ಷೆಗಳು ಇತ್ಯಾದಿ ಎದುರಿಸಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೇರಣೆ ಇರಬೇಕು.
ಕಾಂಬಿನೇಷನ್ಸ್ : ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಅಂಕಿಅಂಶ, ಭೂಗೋಳ ಅಥವಾ ಹೋಮ್ ಸೈನ್ಸ್ನ ವಿಷಯ
ತೆಗೆದುಕೊಳ್ಳಬಹುದಾದ ಕಾಂಬಿನೇಷನ್ಸ್ : P.C.M.B, P.C.MC, P.C.M.E, P.C.M.G, P.C.B.H, P.C.B.E
ವಾಣಿಜ್ಯ (COMMERCE) : ವ್ಯಾಪಾರ, ಕಂಪ್ಯೂಟರ್ ವಿಜ್ಞಾನ, ನಿರ್ವಹಣೆ ಇತ್ಯಾದಿ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಮಾಡಲು ಬಯಸುವ ವಿದ್ಯಾರ್ಥಿಗಳು ಈ ಆಯ್ಕೆಯನ್ನು ಆರಿಸಿ. ವಿಜ್ಞಾನ ವಿದ್ಯಾರ್ಥಿಗಳೊಂದಿಗೆ ಹೋಲಿಸಿದಾಗ ಇದು ತುಲನಾತ್ಮಕವಾಗಿ ಸುಲಭವಾಗಿದೆ. ಆದರೆ ವಾಣಿಜ್ಯ ವಿದ್ಯಾರ್ಥಿಗಳು ಸಂಖ್ಯಾತ್ಮಕ, ವಿಶ್ಲೇಷಣಾತ್ಮಕ, ದತ್ತಾಂಶ, ಸಿದ್ಧಾಂತದ ಮೇಲೆ ಬಲವಾದ ಹಿಡಿತವನ್ನು ಹೊಂದಿರಬೇಕು.
ಕಾಂಬಿನೇಷನ್ಸ್ : ಇತಿಹಾಸ, ಭೂಗೋಳ, ರಾಜಕೀಯ ವಿಜ್ಞಾನ, ಉದ್ಯಮ ಗಣಿತ, ಕಂಪ್ಯೂಟರ್ ಸೈನ್ಸ, ಅಂಕಿಅಂಶ, ಅರ್ಥಶಾಸ್ತ್ರ,
ತೆಗೆದುಕೊಳ್ಳಬಹುದಾದ ಕಾಂಬಿನೇಷನ್ಸ್ : SEBA, ABEM, BSAM, EBAC, HEBA, GEBA, BACS, ABPE
ಕಲಾ ವಿಭಾಗ (ARTS) : ಮುಖ್ಯವಾಗಿ ವಿದ್ಯಾರ್ಥಿಗಳು ಭಾಷಾಶಾಸ್ತ್ರಜ್ಞ, ಸಾಮಾಜಿಕ, ಕಲಾವಿದ ಹೊಂದಿರುವ ವಿದ್ಯಾರ್ಥಿಗಳಿಗೆ ಈ ಕೊರ್ಸ್ ಮಾಡಬಹುದು. ಕಲೆ,ಸಾಹಿತ್ಯ ಅಭಿರುಚಿಯಳ್ಳ ವಿದ್ಯಾರ್ಥಿಗಳು ಇ ಕೊರ್ಸ್ ಮಾಡಬಹುದು.
ಕಾಂಬಿನೇಷನ್ಸ್ : ಸೈಕಾಲಜಿ, ಸಮಾಜಶಾಸ್ತ್ರ, ಶಿಕ್ಷಣ, ಭಾಷೆಗಳು, ಸಂಗೀತ, ಅರ್ಥಶಾಸ್ತ್ರ, ಇತಿಹಾಸ, ಭೂಗೋಳಶಾಸ್ತ್ರ, ರಾಜಕೀಯ ವಿಜ್ಞಾನ, ತರ್ಕ, ಮುಂತಾದ ಆಸಕ್ತಿದಾಯಕ ವಿಷಯಗಳಿವೆ.
ತೆಗೆದುಕೊಳ್ಳಬಹುದಾದ ಕಾಂಬಿನೇಷನ್ಸ್ : H.E.S.P, HEGP, HELP, HEPK, HEGK, HESK, HEPS, EduEK, ಸಾಕಷ್ಟು ಆಯ್ಕೆಗಳಿವೆ.
ಐ.ಟಿ.ಐ, ಪ್ಯಾರಮೆಡಿಕಲ್ ,ಪಾಲಿಟೆಕ್ನಿಕ್ ಡಿಪ್ಲೊಮಾ : ವೃತ್ತಿ ಜೀವನಕ್ಕೆ ಸಂಭಂದಪಟ್ಟ ಆಯ್ಕೆಗಳ ಅವಕಾಶಕ್ಕೆ ಇ ಕೊರ್ಸ್ ಕೂಡ ಉತ್ತಮವಾಗಿದೆ. ಆದರೆ ಇಂಜಿನಿಯರ್ ,ಮೆಡಿಕಲ್ ಕ್ಷೇತ್ರದಲ್ಲಿ ಆಸಕ್ತಿದಾಯಕ ವಿಷಯಗಳು ಒಳಗೊಂಡಿರುತ್ತೇವೆ. ಆದರೆ ಇ ಕ್ಷೇತ್ರದಲ್ಲಿ ನೂರಾರು ಆಯ್ಕೆಗಳಿವೆ .
ಐ.ಟಿ.ಐ : ಪಿಟ್ಟರ್, ಮೆಕ್ಯಾನಿಕಲ್,ಎಲೆಕ್ಟ್ರಿಷನ್, ಎಲೆಕ್ಟ್ರೀಕಲ್ ಇಗೆ ಹಲವಾರು ಆಯ್ಕೆಗಳು
ಪ್ಯಾರಮೆಡಿಕಲ್ : Medical Lab Technology,Medical X-Ray Technology,Medical Records Technology,Operation Theater Technology ಇಗೆ ಹಲವಾರು ಆಯ್ಕೆಗಳು
ಪಾಲಿಟೆಕ್ನಿಕ್ ಡಿಪ್ಲೊಮಾ : ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್,ಕಂಪ್ಯೂಟರ್ ಸೈನ್ಸ್ ಇನ್ನು ಸಾಕಷ್ಟು ಆಯ್ಕೆಗಳಿವೆ..
ಇ ಕೊರ್ಸಗಳ ಕರಿಯರ್ ಬಗ್ಗೆ ಮುಂದಿನ ಭಾಗದಲ್ಲಿ ಮತ್ತಷ್ಟು ತಿಳಿದುಕೊಳ್ಳೊಣ.

Comments

Popular posts from this blog

Karnataka 2018

ಪಿ.ಯು.ಸಿ. ನಲ್ಲಿ ವಾಣಿಜ್ಯ(Commence) ಆಯ್ಕೆ? ಮುಂದೇನು?